ಡುಂಡಿರಾಜರ ಚುಟುಕುಗಳು

ಡುಂಡಿರಾಜರ ಚುಟುಕುಗಳು ಕವಿ ಕವಿ ಪುಂಗವನೆಂಬ ಗುಂಗಿನಲ್ಲಿ ಹುಡುಗಿಯರಬಳಿ ಪ್ರೇಮ ಕಾವ್ಯದ ಪುಂಗಿ ಊದಿದೆ ಪರಿಣಾಮ ನನ್ನ ಎಡಗೆನ್ನೆ ಸ್ವಲ್ಪ ಊದಿದೆ! ನಗು ಅವಳು ಅಕಾಸ್ಮಾತ್ ಸಿಕ್ಕಳು ನನ್ನನು ನೋಡಿ ನಕ್ಕಳು ನಮಗೀಗ ಎರಡು ಮಕ್ಕಳು ಲಿಂಗ ನಲ್ಲ ಪುಲ್ಲಿಂಗ ನಲ್ಲೆ ಸ್ತ್ರೀಲಿಂಗ ಏಕಾಂತದಲ್ಲಿ ಭೇದವೆಲ್ಲಿ ಇಬ್ಬರೂ ಒಂದೇ ದಾರ್ಲಿಂಗ ಚೆಲುವು ನಿನ್ನ ಚೆಲುವು ನೋಡಲಿಕ್ಕೆ ಸಾಲದು ಎರಡು ಅಕ್ಷಿ ಎಂಬುದಕ್ಕೆ ಪ್ರಿಯೆ ನನ್ನ ಕನ್ನಡಕವೇ ಸಾಕ್ಷಿ ಬಡವ ಬಡವನಾದರೂ ಪ್ರಿಯೆ ಹೃದಯ ಸಂಪತ್ತಿನಲ್ಲಿ ನಾನು ಟಾಟಾ